Surprise Me!

ಮಹಾ ಶಿವರಾತ್ರಿ, ಫೆಬ್ರವರಿ 13 2018 : ಧರ್ಮಸ್ಥಳದಲ್ಲಿ ನೀವು ಪಾಲಿಸಬೇಕಾದ ನಿಯಮಗಳು | Oneindia Kannada

2018-02-10 13 Dailymotion

On eve of Maha Shivaratri on Tuesday (Feb 13), Dharmasthala Manjunatha Swamy temple important appeal and instructions to devotees.


ಮಹಾಶಿವರಾತ್ರಿಯ ವೇಳೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಬರುವ ಯಾತ್ರಾರ್ಥಿಗಳು ಗಮನಿಸಬೇಕಾದ ಮಹತ್ವದ ಪ್ರಕಟಣೆಯನ್ನು ದೇಗುಲದ ಆಡಳಿತ ಮಂಡಳಿ ಹೊರಡಿಸಿದೆ. ಫೆಬ್ರವರಿ ಏಳರಂದು ದೇಗುಲದ ಅಧಿಕೃತ ಫೇಸ್ ಬುಕ್ ಅಕೌಂಟಿನ ಮೂಲಕ ಭಕ್ತಾದಿಗಳಲ್ಲಿ ದೇವಾಲಯ ಮನವಿ ಮಾಡಿದ್ದು, ಪ್ರಮುಖವಾಗಿ ಪಾದಯಾತ್ರೆಯ ಮೂಲಕ ಧರ್ಮಸ್ಥಳ ದೇಗುಲಕ್ಕೆ ಬರುವ ಯಾತ್ರಾರ್ಥಿಗಳು ಈ ಪ್ರಕಟಣೆಯನ್ನು ಗಮನಿಸುವಂತೆ ಸೂಚಿಸಲಾಗಿದೆ. (ರೈ ಧರ್ಮಸ್ಥಳಕ್ಕೆ ಆಣೆ-ಪ್ರಮಾಣಕ್ಕೆ ಬರಲಿ, ಬಂಟ್ವಾಳ ಸವಾಲ್) ಮಹಾ ಶಿವರಾತ್ರಿಯಂದು (ಫೆ 13) ಮಂಜುನಾಥಸ್ವಾಮಿಯ ದರ್ಶನಕ್ಕಾಗಿ, ಬೆಂಗಳೂರು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪಾದಯಾತ್ರೆಯ ಮೂಲಕ ಧರ್ಮಸ್ಥಳಕ್ಕೆ ಭಕ್ತರು ಬರುವ ಪರಿಪಾಠ ಹಿಂದಿನಿಂದಲೂ ಇದೆ.